ಪಡೆ ಏಕೆ?
ನಾವು ನಮ್ಮ ಇತಿಹಾಸ ಸರಿಯಾಗಿ ತಿಳಿದು ಕೊಂಡರೆ ಮಾತ್ರ ಉಜ್ವಲ ಭವಿಷ್ಯ ರೂಪಿಸಿಕೊಳ್ಳಲು ಸಾದ್ಯವೆಂದು ಸ್ವಾಮಿ ವಿವೇಕಾನಂದರು ನುಡಿದಿದ್ದಾರೆ.
ಹಣ-ಹೆಸರು ಮಾಡುವುದೆ ಜೀವನವೆಂದು ತಿಳಿದು ಗ್ರಾಮ ತೊರೆದು ನಗರಗಳಿಗೆ ವಲಸೆ ಹೋಗುತ್ತಿರುವ ನಮ್ಮ ಯುವಕರಿಗೆ, ಈ ನೆಲದ ಮಹಿಮೆ (ಇತಿಹಾಸ, ಸಂಸ್ಕೃತಿ, ಸಂಸ್ಕಾರ) ತಿಳಿಸಿ ಮನೆ-ಮನಸು-ಗ್ರಾಮಗಳನ್ನು ಉಳಿಸಿ-ಬೆಳೆಸಿಯೆಂದು ಪ್ರೇರೆಪಿಸಲು ಈ ಭೂಭಾಗವನ್ನು ಕಟ್ಟಿ ಬೆಳೆಸಿದ ತಲಕಾಡು ಗಂಗರಸರ ಶ್ರೇಷ್ಟ ದೊರೆ ಶ್ರಿಪುರುಷನ ಸ್ಮರಣಾರ್ಥ-ಶ್ರಿಪುರುಷ ಪಡೆ ಸ್ವಾಭಿಮಾನದ ನಡೆ ತಲಕಾಡಿನ ಮರಳಿನಲ್ಲಿ ಮರೆತು ಹೋಗಿರುವ ಗಂಗರಸರ ನೆನೆಪಿಸುವ ಮೊಟ್ಟ ಮೊದಲ ಪ್ರಯತ್ನವಿದು.
ಶ್ರೀಪುರುಷನ ಇತಿಹಾಸ
ಸರಿಸುಮಾರು ಏಳುನೂರು ವರುಷ ದಕ್ಷಿಣ ಕರ್ನಾಟಕದಲ್ಲಿ ಅಡಳಿತ ಮಾಡಿ ಕನ್ನದ ಭಾಷೆ ಹಾಗೂ ಸಂಸ್ಕೃತಿಯ ಮೂಲಪುರುಷರಾದ ತಲಕಾಡು ಗಂಗರಸರ ಕೊಡುಗೆ ಅನನ್ಯವಾದುದು. ಇವರಲ್ಲಿ ಶ್ರೆಷ್ಟ ದೊರೆ ಶ್ರಿಪುರುಷ ಜಾವಲಿ ಮತ್ತು ದೆವರಹಳ್ಳಿ ಶಾಸನಗಳ ಪ್ರಕಾರ ಶ್ರಿಪುರುಷ ಕ್ರಿಶ ೭೨೬ರಲ್ಲಿ ಪಟ್ಟವೇದನೆಂದು ತಿಳಿಯಬಹುದು ೬೨ ವರುಷಗಳ ಸುದೀಘ ಅವದಿಗೆ ರಾಜ್ಯಾಭಾರ ನಡೆಸಿರುತಾನೆ. ಈತನಿಗೆ ರಾಜಕೆಸರಿ ಎಂಬ ಮತ್ತೊಂದು ಹೆಸರಿತ್ತು. ಸ್ವತಃ ಕವಿಯಾಗಿದ್ದು ಗಜಶಾಸ್ತ್ರ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದನು. ಶ್ರೀಪುರುಷನ ಕಾಲದಲ್ಲಿ ಗಂಗರಾಜ್ಯವು ‘ಶ್ರೀರಾಜ್ಯ` ಎಂದು ಕರೆಸಿಕೊಂಡಿತ್ತು. ಈತನಿಗೆ `ರಾಜಕೇಸರಿ”, “ಭಿಮಕೋಪ” “ರಣಭಾಜನ”, “ಪೆಮಾನಡಿ”ಎಂಬ ಬಿರುದುಗಳಿದ್ದವು. ಶ್ರಿಪುರುಷನು ಕೊಂಗುದೇಶದ ಪೇರೂರಲ್ಲಿ ಕ್ರಿಶ ೭೨೯ರಲ್ಲಿ ಬಸಿದಿಯನ್ನು ಕಟ್ಟಿಸಿದನು. ಬಾದಮಿ , ಚಾಲುಕ್ಯರ ಜೊತೆ ವೈವಾಹಿಕ ಸಂಬಂಧ ಹೊಂದಿದ್ದ ಶ್ರೀಪುರುಷನು ಕೆರೆ, ಕಟ್ಟೆ, ದೇವಸ್ಥಾನಗಳನ್ನು ಕಟ್ಟಿಸಿ ಕನ್ನದ ಭಾಷೆ ನೆಲ, ಜಲ, ಜನರ ಸ್ವಾಭಿಮಾನದ ಸಂಕೇತ.
ಗಂಗರ ಬಗ್ಗೆ
ಗಂಗರು ಕರ್ನಾಟಕವನ್ನು ಆಳಿದ ಅತ್ಯಂತ ಪ್ರಾಚೀನ ರಾಜವಂಶ ಮತ್ತು ದಕ್ಷಿಣ ಭಾರತದಲ್ಲಿ ಸುಮಾರು ೧ ಸಾವಿರ ವರ್ಷಗಳಿಗಿಂತಲೂ ಅಧಿಕ ಧರ್ಮ ರಾಜಕಾರಣವನ್ನು ನೀಡಿದ ಹೆಗ್ಗಳಿಕೆ.ಗಂಗವಂಶ ಕರ್ನಾಟಕದಲ್ಲಿ ಸುಮಾರು ಕ್ರಿ.ಶ ಮುನ್ನೂರೈವತ್ತು ರಿಂದ ಸಾವಿರದ ಎಂಟರ ವರೆಗೆ ಆಳಿದ ರಾಜವಂಶ. ಕನ್ನಡ ಭಾಷೆ ನೆಲ ಹಾಗೂ ಸಂಸ್ಕೃತಿಯನ್ನು ಸುಮಾರು ೭ನೂರು ವರ್ಷಗಳ ಕಾಲ ಆಡಳಿತ ಮಾಡಿ ಅಮೂಲ್ಯ ಕೊಡುಗೆಯನ್ನು ನೀಡಿರುವುದು ಗಂಗರಸರ ಶೌರ್ಯ ಸಾಹಸ ತ್ಯಾಗ ಬಲಿದಾನ ಪ್ರಜಾವಾತ್ಸಲ್ಯ ನಮ್ಮ ಇತಿಹಾಸದಲ್ಲಿ ಅಜರಾಮರ. ಕಿ.ಪೊ. ಕುಂತಳ ದೇಶವೆಂದು ಪ್ರಖ್ಯಾತವಾಗಿದ್ದ ಕರ್ನಾಟಕದಲ್ಲಿ ಮೌರ್ಯ ಚಕ್ರವರ್ತಿ ಯಾದ ಚಂದ್ರಗುಪ್ತನು ತನ್ನ ಕೊನೆಯ ದಿವಸಗಳನ್ನು ಶ್ರವಣಬೆಳಗೊಳದಲ್ಲಿ ಕಳೆದ ನೆಂಬುದು ಇತಿಹಾಸದಿಂದ ತಿಳಿದ ವಿಷಯ . ಜೈನಗುರು ಸಿಂಹನಂದಿ ಯಿಂದ ಸ್ಥಾಪಿತವಾದ ಗಂಗವಂಶ ಸರ್ವಜನಾಂಗದ ಶ್ರೇಯಕ್ಕಾಗಿ ಶ್ರಮಿಸಿದೆ . ಗಂಗರಸರ ಮಂತ್ರಿಯಾದ ಚಾವುಂಡರಾಯನು ಶ್ರವಣಬೆಳಗೊಳದಲ್ಲಿ ಬೃಹತ್ ಬಾಹುಬಲಿಯ ಶಿಲ್ಪ ಪ್ರತಿ ಷ್ಠಾಪನೆ ಮಾಡುತ್ತಾನೆ. ಗಂಗರಸ ರ ಶೌರ್ಯ ಮತ್ತು ಪರಾಕ್ರಮಕ್ಕೆ ಉದಾಹರಣೆ ಇವರು ಪಲ್ಲವರಿಂದ ಉಗ್ರೋ ದಯವೆಂಬ ರತ್ನ ಆಹಾರವನ್ನು ಪಡೆದಿರುತ್ತಾರೆ. ಇವರ ಸಾಮ್ರಾಜ್ಯವು ಉತ್ತರಕ್ಕೆ ಮರಂದಲೆ(dharwad) ಪೂರ್ವಕ್ಕೆ ತೊಂಡೈನಾಡು (telengana) ದಕ್ಷಿಣಕ್ಕೆ ಕೊಂಗುನಾಡು(tanjavore) ಮತ್ತು ಪಶ್ಚಿಮಕ್ಕೆ ಅರಬ್ಬೀ ಸಮುದ್ರ ಗಳು ಮೇ ರೆಯಾಗಿದ್ದವು. ಇಂದಿನ ಕೋಲಾರ ಅವರ ಮೊದಲ ರಾಜಧಾನಿಯಾಗಿತ್ತು ಎರಡನೇ ರಾಜಧಾನಿ ತಲಕಾಡು . ಆದ್ದರಿಂದಲೇ ಇವರನ್ನು ತಲಕಾಡು ಗಂಗರು ಎಂದು ಕರೆಯಲಾಗಿದೆ. ಇವರ ಪ್ರಮುಖ ರಾಜಲಾಂಛನ ಅಥವ ಮುದ್ರೆ ಆನೆ (ಗಜ) ಯಾಗಿತ್ತು. ಗಂಗರು ತಮ್ಮ ದೀರ್ಘವಾದ ಆಡಳಿತಾವಧಿಯಲ್ಲಿ ತಮ್ಮ ಸಮಕಾಲೀನರಾಗಿ ಅಂದು ದಕ್ಷಿಣ ಭಾರತದಲ್ಲಿ ರಾಜ್ಯವಾಳುತ್ತಿದ್ದ ಕದಂಬರು ಬಾದಾಮಿ ಚಾಲುಕ್ಯರು ರಾಷ್ಟ್ರಕೂಟರು ಪಾಂಡ್ಯರು ಪಲ್ಲವರು ಮತ್ತು ಚೋಳ ರಾಜ ಮನೆತನಗಳೊಂದಿಗೆ ರಾಜಕೀಯವಾಗಿ ಮತ್ತು ರಕ್ತ ಸಂಬಂಧವನ್ನು ಬೆಳೆಸಿಕೊಂಡಿದ್ದರು .
ಶ್ರೀಪುರುಷನು ಗಂಗ ವಂಶದ ಪ್ರಸಿದ್ಧ ದೊರೆ ಅವನ ಜೀವನ ಸಾಧನೆಗಳು ಸಾಹಿತ್ಯ ಮತ್ತು ಶಾಸನಗಳ ಆಧಾರದಿಂದ ಸ್ಪಷ್ಟ ಪಡುತ್ತದೆ ಶ್ರೀಪುರುಷನು ಒಂದನೆಯ ಶಿವಮಾರನ ಮೊಮ್ಮಗನು ತಿರುಮಕೂಡಲು ನರಸೀಪುರದ ಶಾಸನ ದ ಪ್ರಕಾರ ಅವನನ್ನು ಮಾಧವ ಮುತ್ತರಸ ಎಂದು ಪ್ರಸ್ತಾಪಿಸಲಾಗಿದೆ . ರಾಮಾಯಣ ಮತ್ತು ಮಹಾಭಾರತದಲ್ಲಿ ವಹ್ನೀಪುರ ಎಂದೇ ಪ್ರಸಿದ್ಧಿ ಪಡೆದಿದ್ದ ಮೈಸೂರು ಜಿಲ್ಲೆಯ ಬನ್ನೂರು ಶ್ರೀಪುರುಷನ ಜನ್ಮಸ್ಥಳವೆಂದು ಬಿ ಎಲ್ ರೈಸ್ ಅವರು ಉಲ್ಲೇಖಿಸಿದ್ದಾರೆ. ಗಂಗ ದೊರೆ ಶ್ರೀಪುರುಷನು ಕೊಡುಗೆಯ ಶಾಸನವನ್ನು ಬನ್ನೂರಿನ ಕೋದಂಡರಾಮ ದೇವಸ್ಥಾನದಲ್ಲಿ ಕಾಣಬಹುದಾಗಿದೆ. ಶ್ರೀಪುರುಷನ ಆಳ್ವಿಕೆಯಲ್ಲಿ ಅವನು ಸಾಧಿಸಿದ ಪ್ರಗತಿ ಸಂಕೇತವಾಗಿ ಗಂಗರಾಜ್ಯವನ್ನು ಶ್ರೀ ರಾಜ್ಯವೆಂದು ಕರೆಯಲ್ಪಟ್ಟಿದೆ.
ಶ್ರೀಪುರುಷನು ಸಿಂಹಾಸನ ವನ್ನೇರುವ ಮುನ್ನ ಗಂಗವಾಡಿಯ ಪೂರ್ವಕ್ಕಿದ್ದ ಕೆರೆ ಕುಂದ ೩೦೦, ಎಳೆನಾಗ ರನಾಡು ೭೦, ಅವನ ್ಯ ನಾಡು ೩೦೦, ಪೆನುಗೊಂಡ ಮುಂತಾದ ೧೨ ಪ್ರಾಂತ್ಯಗಳ ಆಡಳಿತಾಕಾರಿಯಾಗಿ ವಿಶೇಷ ಅನುಭವ ಗಳಿಸಿದ್ದನು ಶ್ರೀಪುರುಷನು ತಾನು ಪ್ರಾಂತ್ಯಾಧಿಕಾರಿಯಾಗಿ ಇರುವ ಸಮಯದಲ್ಲಿಯೇ ಗಂಗರ ವೈರಿಯಾಗಿದ್ದ ಬಾಣ ರನ್ನು ಸೋಲಿಸಿ ಆತನ ಮಗ ಜಗದೇಕಮಲ್ಲ ಬಾಣನಿಗೆ ಪಟ್ಟಾಭಿಷೇಕ ಮಾಡಿದನು.
ಗಂಗರನ್ನು ತಮ್ಮ ಸಾಮಂತರನ್ನಾಗಿ ಮಾಡಿಕೊಳ್ಳಬೇಕೆಂದು ಚಾಲುಕ್ಯರ ಎರಡನೆಯ ವಿಕ್ರಮಾದಿತ್ಯನು ವಿನಯದಿಂದ ಒಲಿಸಿಕೊಳ್ಳಲು ಪ್ರಯತ್ನಿಸುತ್ತಾನೆ . ಸ್ವಾಭಿಮಾನಿಗಳಾದ ಗಂಗರು ಇದಕ್ಕೆ ತಲೆಬಾಗುವುದಿಲ್ಲ ಕಡೆಗೆ ಯುದ್ಧದಿಂದಲೇ ಗಂಗರನ್ನು ಗೆದ್ದು ಸಾಮಂತರನ್ನಾಗಿ ಮಾಡಿಕೊಳ್ಳಬೇಕೆಂದು ಅಪಾರ ಸೇನೆಯೊಂದಿಗೆ ಯುದ್ಧಕ್ಕೆ ಸಜ್ಜಾಗುವ ನು ಇದನ್ನು ತಿಳಿದ ಶ್ರೀಪುರುಷನು ಚಾಲುಕ್ಯರನ್ನು ಎದುರಿಸಲು ತಾನು ಸನ್ನದ್ಧನಾಗಿ ಹೊರಡುವನು ಎರಡೂ ಸೇನೆಗಳು ರಣರಂಗದಲ್ಲಿ ಹೋರಾಡಲು ಎದುರಾದಾಗ ಶ್ರೀಪುರುಷನ ಮನಸ್ಸಿನಲ್ಲಿ ಇಂಥ ಒಂದು ಆಲೋಚನೆ ಬರುವುದು ಚಾಲುಕ್ಯರು ನಮ್ಮ ವಂಶದ ಹೆಣ್ಣುಮಗಳ ಮಕ್ಕಳು. ಗಂಗರು ಮತ್ತು ಚಾಲುಕ್ಯರಲ್ಲಿ ಒಂದೇ ರಕ್ತ ಹರಿಯುತ್ತಿದೆ ಅಧಿಕಾರ ವ್ಯಾಮೋಹದಿಂದ ನಾವಿಬ್ಬರೂ ಹೋರಾಡಿದರೆ ಎರಡೂ ಕಡೆಯೂ ಅಪಾರ ನಷ್ಟ ಉಂಟಾಗುತ್ತದೆ . ರಾಷ್ಟ್ರಕೂಟರು ಆಗ ಸುಲಭವಾಗಿ ನಮ್ಮ ರಾಜ್ಯಗಳನ್ನು ಕಬಳಿಸುತ್ತಾರೆ ಎಂಬುದಾಗಿ 1ಓಲೆಯನ್ನು ಬರೆದು ಮಾಂಡಲಿಕನ ಕೈಯಲ್ಲಿ ವಿಕ್ರಮಾದಿತ್ಯನಿಗೆ ಕಳಿಸುವನು . ಈ ಕಡೆ ಚಾಲುಕ್ಯ ವಿಕ್ರಮನ ಇದೇ ಯೋಚನೆಯಲ್ಲಿ ಇದ್ದನು ಶ್ರೀಪುರುಷನು ರಣಕಲಿ ಸೋಲನರಿಯದ ಅಜೇಯ 1ಪಕ್ಷ ಶ್ರೀಪುರುಷನ ಗೆದ್ದರೆ ತಾನು ಗಂಗರಿಗೆ ಸಾಮಂತನಾಗಬೇಕಾಗುವುದೆಂದೂ ಎಂಬ ಅನುಮಾನ ಮೂಡುತಿರಲು ಈ ಓಲೆ ಅವನ ಕೈ ಸೇರುವುದು . ಪತ್ರವನ್ನು ಓದುತ್ತಲೆ ವಿಕ್ರಮಾದಿತ್ಯನು ಪಶ್ಚಾತಾಪ ಗೊಳ್ಳುತ್ತಾನೆ ತನಗಿಂತಲೂ ಕಿರಿಯವನಾದ ಶ್ರೀಪುರುಷನ ಮುಂದಾಲೋಚನೆಯನ್ನು ರಾಜನೀತಿ ನೈಪುಣ್ಯವನ್ನೂ ಹಾಗೂ ಶ್ರೀ ಪುರುಷನಿಗೆ ಚಾಲುಕ್ಯರ ಮೇಲಿರುವ ಮೇಲಿರುವ ಅಭಿಮಾನವನ್ನು ಕಂಡು ಸಂತಸದಿಂದ ರಥವನಿಳಿದು ಗಂಗರ ಸೇನೆಯತ್ತ ನಡೆದು ಶ್ರೀ ಪುರುಷನನ್ನು ಆಲಂಗಿಸಿಕೊಂಡನು . ಹೀಗೆ ತನ್ನ ಮನೋ ಚಾತುರ್ಯದಿಂದ ರಾಜ್ಯವನ್ನಾಳಿದ ಶ್ರೀಪುರುಷನು ಬಾವಲಿ ಮತ್ತು ದೇವರಹಳ್ಳಿ ಶಾಸನಗಳ ಪ್ರಕಾರ ಶ್ರೀಪುರುಷನ ಕ್ರಿಸ್ತಶಕ ೭೩೬ ರಲ್ಲಿ ಪಟ್ಟವೇರಿದ್ದನೆಂದು ತಿಳಿದು ತಿಳಿದು ಬರುತ್ತದೆ ಸುಮಾರು ಅರವತ್ತೆರಡು ವರ್ಷಗಳ ಸುಧೀರ್ಘ ಅವಧಿ ರಾಜ್ಯಭಾರ ನಡೆಸಿರುತ್ತಾನೆ. ಈತನಿಗೆ ರಾಜಕೇಸರಿ ಎಂಬ ಮತ್ತೊಂದು ಹೆಸರಿತ್ತು ಸ್ವತಃ ಕವಿಯಾಗಿದ್ದು ಗಜಶಾಸ್ತ್ರ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದನು
ಗಂಗಾ ಚಾಲುಕ್ಯರು ಒಂದಾಗಿ ಪಲ್ಲವರನ್ನು ಸೋಲಿಸಿ ಕಳೆದುಕೊಂಡಿದ್ದ ರಾಜ್ಯಗಳನ್ನು ಮತ್ತೆ ಸ್ವಾಧೀನಪಡಿಸಿಕೊಂಡರು ಶ್ರೀಪುರುಷನು ತನ್ನ ರಾಜಧಾನಿಯನ್ನು ತಲಕಾಡಿನಿಂದ ಮಾನ್ಯ ಪುರಕ್ಕೆ ಬದಲಾಯಿಸಿದನು ಶ್ರೀಪುರುಷನು ಹಾಗೂ ಮಾನ್ಯ ಪುರಿಯ ಖ್ಯಾತಿ ದೇಶವಿದೇಶಗಳಲ್ಲಿ ಹೆಚ್ಚಿತು. ದೇಶದ ನಾನಾ ಕಡೆಗಳಿಂದ ವಿವಿಧ ಜನಾಂಗಗಳು ಗಂಗಾ ರಾಜ್ಯಕ್ಕೆ ಬಂದು ನೆಲೆಸಿದೆವು ರಾಶ್ಟ್ರಕೂಟರು ಮೊದಲು ಚಾಲುಕ್ಯರ ಸಾಮಂತರಾಗಿದ್ದ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಂಡು ಚಾಲುಕ್ಯರನ್ನು ಧಿಕ್ಕರಿಸಿ ಸ್ವತಂತ್ರರಾಗಿ ಮಾನ್ಯಕೇಟ ವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡರು ಚಾಲುಕ್ಯರು ಅನೇಕ ಪ್ರದೇಶಗಳನ್ನು ವಶಪಡಿಸಿ ಕೊಂಡಿದ್ದರು ಶ್ರೀಪುರುಷನು ಚಾಲುಕ್ಯ ರಾಜಕುಮಾರಿ ವಿಜಯ ಮಹಾದೇವಿಯನ್ನು ಒರೆಸಿದ್ದು ರಾಷ್ಟ್ರಕೂಟರಿಗೆ ನುಂಗಲಾರದ ತುತ್ತಾಗಿತ್ತು . ಇದೇ ಸಮಯದಲ್ಲಿ ಪಲ್ಲವರು ರಂಗದ ಮೇಲೆ ಅಕ್ರಮಣ ಮಾಡಲು ಪ್ರಾರಂಭಿಸಿದರು ಗಂಗರಿಗೆ ಸೋಲಾದರೂ ನಂತರ ಶ್ರೀಪುರುಷನು ಕಡುಗಲಿ ಯಂತೆ ಹೋರಾಡಿ ಜಯಶೀಲರಾದರು ಇದರಿಂದ ಭೀಮಕೋಪ ಪೆರ್ಮಾನಡಿ ಋಣಭಾಜನಂ ಎಂಬ ಬಿರುದುಗಳನ್ನು ಧರಿಸಿದನು ಪಾಂಡ್ಯರು ಕೊಂಗುನಾಡು ವನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿ ಶ್ರೀಪುರುಷನ ವಿರೋಧಿಗಳಾದರು ಪಲ್ಲವರುಪಾಂಡ್ಯರು ಕಡು ವಿರೋಧಿಗಳಾಗಿದ್ದ ರಿಂದ ಪಾಂಡ್ಯರು ಶ್ರೀಪುರುಷನ ಸ್ನೇಹವನ್ನು ಬಯಸಿದರು ಶ್ರೀಪುರುಷನು ಇದಕ್ಕೆ ಸಮ್ಮತಿಸಿ ತನ್ನ ಮಗಳನ್ನು ಪಾಂಡ್ಯರಾಜನಾದ ರಾಜ ಸಿಂಹನಿಗೆ ಧಾರೆ ಎರೆದುಕೊಟ್ಟನು ಇದರಿಂದ ಗಂಗಾ ಪಾಂಡ್ಯರಲ್ಲಿ ಸ್ನೇಹ ಬೆಳೆಯಿತು. ಶ್ರೀಪುರುಷನು ಕಾಡುವೆಟ್ಟಿ ಎಂಬ ಪಲ್ಲವ ಅರಸ ನನ್ನು ಸಂಹರಿಸಿ ದನು. ಪಲ್ಲವರ ಮೇಲಿನ ವಿಜಯವು ಶ್ರೀಪುರುಷನ ಆಳ್ವಿಕೆಗೆ ಮಹತ್ತರ ಘಟನೆಗಳಲ್ಲೊಂದು ಎಂದು ಪರಿಗಣಿಸಬಹುದು .
ಶ್ರೀಪುರುಷನ ಖ್ಯಾತಿ ದಿನೇದಿನೇ ಬೆಳೆಯುತ್ತಿರಲು ರಾಷ್ಟ್ರಕೂಟರು ಶ್ರೀ ಪುರುಷನನ್ನು ತಮ್ಮ ಸಾಮಂತನನ್ನಾಗಿ ಮಾಡಿಕೊಳ್ಳಲು ಪ್ರಯತ್ನಿಸಿದರು ಆದರೆ ಶ್ರೀಪುರುಷನು ಗಂಗಾ ಸಾಮ್ರಾಟನಾದ ತಾನು ರಟ್ಟರ ಸಾಮಂತ ಎಂದು ಸಮರಕ್ಕೆ ಸಿದ್ಧನಾದನು ಕ್ರಿಸ್ತಶಕ ೭೬೦ ರಾಷ್ಟ್ರಕೂಟರ ದೊರೆ ದಂತಿದುರ್ಗ ನಿಗೂ ಗಂಗರಿಗೂ ಯುದ್ಧವಾಗಿ ಶ್ರೀಪುರುಷನೂ ತನ್ನ ರಾಜ್ಯದ ಕೆಲವು ಭಾಗಗಳನ್ನು ಕಳೆದುಕೊಳ್ಳಬೇಕಾಯಿತು. ಮತ್ತೆ ನಡೆದ ಯುದ್ಧಗಳಲ್ಲಿ ಶ್ರೀಪುರುಷನು ಗೆದ್ದು ಕಳೆದುಕೊಂಡಿದ್ದ ಪ್ರಾಂತ್ಯಗಳನ್ನು ಪುನಃಪಡೆದನು ದಂತಿದುರ್ಗನ ನಂತರ ಒಂದನೆಯ ಕೃಷ್ಣನು ರಾಷ್ಟ್ರಕೂಟ ಸಿಂಹಾಸನವನ್ನೇರಿದನು . ಗಂಗರನ್ನು ಸೋಲಿಸಲು ಅಪಾರ ಸೇನೆಯೊಡನೆ ಬಂದು ಮಾನ್ಯ ಪುರಿಯ ಬಳಿ ದಾಳಿ ಮಾಡಿದನು ಕೃಷ್ಣನಿಗೂ ಶ್ರೀ ಪುರುಷನಿಗೂ ನಿರಂತರವಾಗಿ 6ವರ್ಷಗಳು ಯುದ್ಧ ನಡೆದು ಒಮ್ಮೆ ರಾಷ್ಟ್ರಕೂಟರು ಮತ್ತೊಮ್ಮೆ ಗಂಗರು ಜಯಗಳಿಸುತ್ತಿದ್ದರು . ಈ ಯುದ್ಧದಲ್ಲಿ ಶ್ರೀಪುರುಷನ ಪುತ್ರನು (ಶ್ರೀಪುರುಷನ ಪುತ್ರ ಅವರಲ್ಲೊಬ್ಬನಾಗಿದ್ದ ಸಿಯಗೆಲ್ಲ) ವೀರಮರಣವನ್ನಪ್ಪಿದ (ಮಧುಗಿರಿ ಶಾಸನ ). ಪುತ್ರನನ್ನು ಕಳೆದುಕೊಂಡ ಶ್ರೀಪುರುಷನು ಕಾಲಭೈರವನಂತೆ ರಾಷ್ಟ್ರಕೂಟರನ್ನು ಎದುರಿಸಿದನು . ಆತನ ಕಲಿತನಕ್ಕೆ ವಿಜಯಲಕ್ಷ್ಮಿ ಗಂಗರಿಗೆ ಒಲಿದಳು ರಾಷ್ಟ್ರಕೂಟರು ಸೋತು ಅಪಾರ ನಷ್ಟದಿಂದ ಹಿಮ್ಮೆಟ್ಟಿದರು ಶ್ರೀಪುರುಷನು ಗಂಗ ಸಿಂಹಾಸನದ ಮೇಲೆ ಇರುವವರೆಗೂ ರಾಷ್ಟ್ರಕೂಟರು ಮಾನ್ಯ ಪುರಿಯ ಕಡೆ ತಿರುಗಿ ನೋಡಲಿಲ್ಲ.
ಹಿರೇಗುಂಡಗಲ್ ಮತ್ತು ಸಂಕೇನಹಳ್ಳಿಯಲ್ಲಿ ನ ವೀರಗಲ್ಲುಗಳು ಶ್ರೀಪುರುಷ ಮತ್ತು ಎರಡನೆಯ ಶಿವಮಾರನ ಕಾಲದಲ್ಲಿಯೇ ರಾಷ್ಟ್ರಕೂಟರು ಮುಂತಾದವರೊಂದಿಗೆ ಜರುಗಿದ ಯುದ್ಧಗಳ ಬಗ್ಗೆ ಪ್ರಸ್ತಾಪಿಸುತ್ತ ತ್ತವೆ ಈ ವೀರಗಲ್ಲು ಗಳಿಗೆ ಸಂಬಂಧಿಸಿದ ತುಮಕೂರು ಶಾಸನವು ಶ್ರೀ ಪುರುಷನ ಸಮಕಾಲೀನ ಸಾಮಂತರು ಅಥವಾ ಪ್ರಮುಖ ಅಧಿಕಾರಿಗಳಾದ ಸಿಯಗೆಲ್ಲ, ಕಡ್ಡಾ ನೆ, ಪ್ರಣಾಲಿಯ ರಸ ಶ್ರೀ ಜನಾರ್ಧನ್ ಮತ್ತು ಶ್ರೀ ಚಾಸರ್ ಮುಂತಾದವರ ಹೆಸರುಗಳನ್ನು ಉಲ್ಲೇಖಿಸಿದೆ .
ಶ್ರೀಪುರುಷನು ಪ್ರಾಚೀನ ಹಿಂದೂ ಅರಸರ ಒಳ್ಳೆಯ ಸಂಪ್ರದಾಯಗಳನ್ನು ಅನುಸರಿಸಲು ಪ್ರಯತ್ನಿಸಿದನು ” ಸಮ್ಯಕ್ ಪ್ರಜಾಪಾಲನೆ ಮಾತ್ರಾ ದಿಕತಾರಾಜ್ಯ ಪ್ರಯೋಜನಸ್ಯ” (ಎಲ್ಲಾ ಜನರಿಗೂ ದೊರೆಯುವ ರಕ್ಷಣೆಯೇ ಒಂದು ರಾಜ್ಯದ ಉಪಯುಕ್ತತೆಯ ಮಾನದಂಡ ) ಎಂಬುದು ಗಂಗರ ತಾರಕಮಂತ್ರವಾಗಿ ಇದ್ದೀತು .
ಶ್ರೀಪುರುಷನು ವೀರಯೋಧನು ಮಾತ್ರವಲ್ಲದೆ ಸುಸಂಸ್ಕೃತ ವ್ಯಕ್ತಿಯ ಆಗಿದ್ದನು ಅವನು ಸ್ವತಃ ವಿದ್ಯಾವಂತನಾಗಿದೂರಿದ್ದಲ್ಲದೆ ಸಾಹಿತ್ಯ ಪೋಷಕನೂ ಆಗಿದ್ದನು ಗಜಶಾಸ್ತ್ರವೆಂಬ ಗ್ರಂಥವನ್ನು ಸಂಸ್ಕೃತದಲ್ಲಿ ರಚಿಸಿದನು ಶ್ರೀಪುರುಷನು ಗಜಯುದ್ಧದ ಬಗ್ಗೆ ಅಧಿಕಾರವಾಣಿಯಿಂದ ನುಡಿಯ ಬಲ್ಲವನಾಗಿದ್ದನು . ತನ್ನ ಆಳ್ವಿಕೆಯ ಕೊನೆಯ ವರ್ಷಗಳಲ್ಲಿ ಕೊಂಕಣಿ ರಾಜಾಧಿರಾಜ ಪರಮೇಶ್ವರ ಶ್ರೀಪುರುಷ ಎಂಬ ಬಿರುದನ್ನು ಧರಿಸಿದ . ತಲಕಾಡಿನ ಸಮೀಪ ಕಾವೇರಿ ನದಿ ತೀರ ಮುಡುಕುತೊರೆಯಲ್ಲಿ ತನ್ನ ಕೊನೆಗಾಲವನ್ನು ಕಳೆದು ಇಹಲೋಕವನ್ನು ತ್ಯಜಿಸಿದ . ಸುಮಾರು ಸಾವಿರ ವರ್ಷಗಳ ಅವನ ಸಮಾಧಿ ಅನಾಥವಾಗಿ ಬಿದ್ದಿರುವುದನ್ನು ನೋಡಿದರೆ ಕನ್ನಡಿಗರಿಗೆ ಸಂಕಟವು ಆಗದೆ ಇರದು . ಶ್ರೀಪುರುಷನು ಕರ್ನಾಟಕದ ಇತಿಹಾಸದಲ್ಲಿ ಗಣ್ಯ ಸ್ಥಾನವನ್ನು ಪಡೆದಿದ್ದಾನೆ ಎಂದರೆ ಅತಿಶಯೋಕ್ತಿ ಅಲ್ಲ.