Activities

ಮೈಸೂರು ಮತ್ತು ಬನ್ನೂರು ನಗರದ ಸಮಾನ ಮನಸ್ಸಿನ ಯುವಕರು ಈ ಭಾಗವನ್ನು ಆಳಿದ ಗಂಗರಸರ ಪ್ರಖ್ಯಾತ ದೂರೆ ಶ್ರೀಪುರುಷ ಹೆಸರಿನಲ್ಲಿ ಒಂದು ಸಂಘವನ್ನು ಪ್ರಾರಂಭಿಸಿರುತ್ತಾರೆ. (ಇದರಲ್ಲಿ ವೈದ್ಯರು, ಇಂಜಿನಿಯರುಗಳು, ವಿದ್ಯಾಥಿ‌್ಗಳು , ಉದ್ಯಮಿಗಳು, ಸಮಾಜಸೇವಕರು, ಇರುತಾರೆ). ಈ ಸಂಘದ ಮೂಲ ಉದ್ದೇಶ ನಮ್ಮ ಕನ್ನಡ ಭಾಷೆ, ನೆಲ, ಜಲ, ಪರಂಪರೆಯನ್ನು ಸುಮಾರು ೮ ಶತಮಾನಗಳ ಕಾಲ ಕಾಪಾಡಿದ ಗಂಗಾರಸರ ಕೊಡುಗೆಯನ್ನು ಸ್ಮರಿಸುವ ಕರ್ತವ್ಯ ಮತ್ತು ಮುಂದಿನ ಪೀಳಿಗೆಗೆ ಜಾಗ್ರತೆ ಮೂಡಿಸುವ ಜವಾಬ್ದಾರಿಯನ್ನು ಹೊತ್ತಿರುತದೆ. ಈ ನಿಟ್ಟಿನಲ್ಲಿ ಪುರುಷನ ಸಮಾಧಿ ಇರುವ ಮುಡುಕುತೊರೆ ಮತ್ತು ಐತಿಹಾಸಿಕ ಪ್ರಕಾರ ಅವನ ಹುಟ್ಟೂರಾದ ಬನ್ನೂರು ಮಧ್ಯೆ ಈ ಎರಡು ಊರುಗಳಲಿ ಜಾತ್ರೆ ಇರುವ ದೀನಾಕ ೧೩.೦೨.೨೦೨೦ ರಂದು ಸಾವ‌್ವಜನಿಕರಿಗೆ ಗಂಗಾರಸರ ಮತ್ತು ಶ್ರೀಪುರುಷರ ಕೊಡುಗೆಯನ್ನು ಜ್ಞಾಪಿಸುವ ಸಲುವಾಗಿ ಬನ್ನೂರಿನಿಂದ ಪ್ರಾರಂಭಗೊಂಡು ಮುಡುಕುತೊರೆಯಲ್ಲಿ ಅಂತ್ಯಗೊಳಿಸಲು ಉದ್ದೆಶಿಸಲಾಗಿದೆ. ಬೆಳಿಗ್ಗೆ ೧೦ ಗಂಟೆಗೆ ಬನ್ನೂರಿನ ವಿವೆಕಾನಂದ ಶಿಕ್ಷಣ ಸಂಸ್ಥೆ ಧಮಾಧಿಕಾರಿಗಳಿಂದ ಶ್ರೀಯುತ ಪ್ರಕಾಶ್ ರವರು ಚಾಲನೆ ನೀಡಿ ರಾಲಿಯಲ್ಲಿ ಭಾಗವಹಿಸುತಾರೆ. ಸುಮಾರು ೨೫೦ ಬೈಕ್ನಲ್ಲಿ ೫೦೦ ಮಂದಿ ಭಾಗವಿಸುತ್ತಾರೆ. ರಾಲಿ ಬನ್ನೂರು, ಅತ್ತಹಳ್ಳಿ, ಬೇವಿನಹಳ್ಳಿ, ಸೊಮನಾಥಪುರ, ಸೋಸಲೆ, ಟಿ. ನರಸೀಪುರ, ಮುಡುಕುತೊರೆ.

ಉದ್ದೇಶ : ಕನ್ನಡ ಭಾಷೆ, ನೆಲ, ಜಲ, ಪರಂಪರೆ ಬಗ್ಗೆ ಜಾಗೃತಿ ಮೂಡಿಸುವುದು, `ಶ್ರೀರಾಜ, ಸುಖಿ ರಾಜ್ಯ’ ನೀಡಿದ ಗಂಗಾ ಸಾಮ್ರಟರ ಶ್ರೀಪುರುಷನ ಕೊಡುಗೆಯನ್ನು ಸ್ಮರಿಸುವುದು.

ಗಂಗರಸರ ಕೊಡುಗೆಯ ಬಗ್ಗೆ ಜಾಗ್ರತಿ ಮೂಡಿಸುವ ನಿಟ್ಟಿನಲ್ಲಿ ರಾಜ್ಯ ಮತ್ತು ದೆಶದಲ್ಲಿ ಈ ತರದ ಕಾರ್ಯಕ್ರಮ ಇದೇ ಮೊಟ್ಟಮೊದಲು.